ದೊಡ್ಡ ತಿಮ್ಮದಾಸ
	ಕ್ರಿ. ಶ. ಸು. 1700.  ರಾಮಾನುಜವಿಜಯವೆಂಬ ಕೃತಿಯ ಕರ್ತೃ.  ಇತನ ಇಷ್ಟದೈವ ಲಕ್ಷ್ಮೀರಮಣ ; ಗುರು ರಾಮಾನುಜಾಚಾರ್ಯ.  ಈತ ಬ್ರಾಹ್ಮಣನಿರಬಹುದೆಂದು ಒಂದು ನಂಬಿಕೆ.  ಆದರೆ ಕವಿ ತನ್ನನ್ನು `ಸೂತಕುಲೋದ್ಭವ ಎಂದು ಹೇಳಿಕೊಂಡಿದ್ದಾನೆ.  ದೊಡ್ಡ ತಿಮ್ಮದಾಸನ ಕುಮಾರ ದೊಡ್ಡ ತಿಮ್ಮದಾಸ ಎಂದಿರುವುದರಿಂದ ಕವಿಯ ತಂದೆಗೂ ಅದೇ ಹೆಸರಿದ್ದಿರಬೇಕು.

	ರಾಮಾನುಜವಿಜಯ ಒಂದು ಧಾರ್ಮಿಕ ಗ್ರಂಥ.  ಗದ್ಯರೂಪದಲ್ಲಿದೆ.  ಇದಕ್ಕೆ ಕೈವಲ್ಯ ಚಿಂತಾಮಣಿ ಎಂಬ ಹೆಸರೂ ಇರುವಂತೆ ತಿಳಿಯುತ್ತದೆ.  ಇದರ ಪ್ರತಿ ಪ್ರಕರಣದ ಕೊನೆಯಲ್ಲೂ ಒಂದೊಂದು ಕಂದಪದ್ಯವಿದೆ.  ಶಿವ ನಾರದನಿಗೆ ಬೋಧಿಸಿದಂತೆ ಕವಿ ಇಲ್ಲಿ ಕಥೆ ಹೇಳಿದ್ದಾನೆ.  ಈ ಗ್ರಂಥದಲ್ಲಿ ರಾಮಾನುಜ ಗುರುವಿನ ಚರಿತ್ರ, ವಿಷ್ಣುಪಾರಮ್ಯ, ವಿಶಿಷ್ಟಾದ್ವೈತ ಮತ - ಈ ವಿಷಯಗಳ ನಿರೂಪಣೆಯಿದೆ.
(ಆರ್.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ